ನೀವು, ಈಸ್ಟ್ ಮನ್ ಕಲರ್ ಸಿನೆಮಾಗಳನ್ನು ನೋಡಿರಬಹುದು.ಪಾತ್ರಧಾರಿಗಳ ವೇಷ-ಭೂಷಣ,ಸೆಟ್ಟು ಎಲ್ಲವೂ ತುಂಬ ರಂಗು ರಂಗು.ಪಾತ್ರಧಾರಿಗಳ ಮೇಕಪ್ ಅಂತೂ,ಎಳೆಯ ಮಕ್ಕಳು ಮುಖ-ಮೈ-ಕೈಗೆಲ್ಲ ಬಣ್ಣ ಬಳಿದುಕೊಂಡಂತೆ.ಇದಕ್ಕೆ ಕಾರಣವೆನೆಂದರೆ ಬಹುತೇಕ ನಿರ್ದೇಶಕರು, ಕಲಾವಿದರು,ಮೇಕಪ್ ಮ್ಯಾನ್ಸ್,ಕಪ್ಪು-ಬಿಳುಪ್ಪು ಮತ್ತು ಈಸ್ಟ್ ಮನ್ ಕಲರ್ ನಡುವಿನ ಸೂಕ್ಷ್ಮತೆ ಅರಿಯದೇ ಹೋಗಿದ್ದು.ಕಪ್ಪು-ಬಿಳುಪ್ಪು ಕಾಲದ ಮೇಕಪ್ ರಂಗು,ಪ್ರೇಕ್ಷಕರಿಗೆ ರಾಚುತ್ತಿರಲಿಲ್ಲ.ಈ ಮೇಕಪ್ ಮತ್ತು ಆಗ ಬಳಸಿತ್ತಿದ್ದ ಲೈಟ್ಸ್ ಗಳಿಗೂ ಮ್ಯಾಚ್ ಆಗಿ ಕಲಾವಿದರು ಸುಂದರವಾಗಿಯೇ ಕಾಣುತ್ತಿದ್ದರು.ಈ ಮ್ಯಾಚಿಂಗ್ ಅನ್ನೇ ಈಸ್ಟ್ ಮನ್ ಕಲರ್ ನಲ್ಲಿಯೂ ಬಯಸಿದ್ದರಿಂದ ರಂಗು ಅಗತ್ಯಕ್ಕಿಂತಲೂ ಹೆಚ್ಚಾಗಿತ್ತು.ಇದರಲ್ಲಿ ಕಲಾವಿದರ ಭಾವಾಭಿವ್ಯಕ್ತಿ, ಸೂಕ್ಷ್ಮತೆ ಮರೆಯಾಗಿತ್ತು. ಈಸ್ಟ್ ಮನ್ ನಂತರ ಟೆಕ್ನಿ ಕಲರ್ ಸಿನೆಮಾ ಬಂತು.ಆಗಲೂ ಮೇಕಪ್ ತೀವ್ರತೆ ಕಡಿಮೆಯಾಗಲಿಲ್ಲ.ಕಪ್ಪು-ಬಿಳುಪು ಮತ್ತು ಈಸ್ಟ್ ಮನ್ ಹಂತಗಳಿಗಿಂತಲೂ ಸೂಕ್ಷ್ಮ ಕ್ಯಾಮರಾಗಳು ಬಂದರೂ ಇವುಗಳನ್ನು ನೆರಳು-ಬೆಳಕು ಸಂಯೋಜನೆಯಲ್ಲಿ ಸಮರ್ಥವಾಗಿ ಬಳಸಿಕೊಂಡವರು ಕೆಲವರು ಮಾತ್ರ.ಇಂಥವರ ಸಿನೆಮಾಗಳಲ್ಲಿ ಮಾತ್ರ ಮೇಕಪ್ ಸಮಂಜಸ ಎನ್ನುವ ರೀತಿಯಲ್ಲಿತ್ತು.ನಂತರ ಆರ್.ಬಿ.ತದನಂತರ ಆರ್.ಜಿ.ಬಿ.ಕಲರ್ ಮತ್ತು ಶಕ್ತಿಶಾಲಿ ಕ್ಯಾಮರಾ ಮತ್ತು ಲೆನ್ಸ್ ಗಳ ಹಂತದಲ್ಲಿ ಮೇಕಪ್ ಗೊಡವೆ ಬೇಡ ಎಂದು ನಿರ್ಧರಿಸಿದವರು ಬೆರಳೆಣಿಕೆಯಷ್ಟು ನಿರ್ದೇ...