Skip to main content

Posts

Showing posts from December 28, 2008

ಭಯೋತ್ಪಾದನೆ ಆಯಾಮಗಳು....

ಭಯೋತ್ಪಾದನೆಗೆ ನಾನಾ ಆಯಾಮ.ಧರ್ಮ,ರಾಜಕೀಯ,ಆರ್ಥಿಕ,ಸಾಮಾಜಿಕ.ವೈಯಕ್ತಿಕ ಅರ್ಥ ಸಂಪಾದನೆ ತಳಹದಿ.ಇದಕ್ಕೆ ಧರ್ಮರಾಜಕಾರಣದ ಇಂಬು.ಭಯೋತ್ಪಾದನೆಯಲೀಗ ಇದರದೇ ಪ್ರಾಬಲ್ಯ.ಶತಶತಮಾನಗಳಿಂದ ಭಯೋತ್ಪಾದನೆ ಚಾಲ್ತಿಯಲ್ಲಿದೆ.ಅದರ ಸ್ವರೂಪಗಳು ವಿಭಿನ್ನ.ಆಯುಧ ವಿಜ್ಞಾನ ಪ್ರಗತಿಯಾದಂತೆಲ್ಲ ಭಯೋತ್ಪದನೆ ವಿಜೃಂಭಿಸುತ್ತಿದೆ.ಭಯೋತ್ಪಾದಕರನ್ನು ಮಟ್ಟಹಾಕುವಲ್ಲಿಯೂ ವಿಶ್ವರಾಜಕಾರಣದ ನುಸುಳುವಿಕೆ. ಭಾರತದೊಂದಿಗೆ ಜಂಟಿ ಸಮರಭ್ಯಾಸ ಮಾಡುತ್ತದೆ ಚೀನಾ. ಇದೇ ವೇಳೆ ಪಾಕಿಸ್ತಾನದ ಮೇಲಿನ ಆರೋಪಗಳಿಗೆ ಆಕ್ಷೇಪವನ್ನೂ ಎತ್ತುತ್ತದೆ.ಆಪ್ಘಾನೀಸ್ತಾನದ ಮೇಲೆ ದಂಡೇತ್ತಿ ಹೋಗುವ ಅಮೆರಿಕ ನವರಂಗಿ ಆಟವಾಡುತ್ತದೆ.ಈ ಸಂದರ್ಭದಲ್ಲಿ ಅತ್ಯುತ್ತಮ ವಿದೇಶಾಂಗ ನೀತಿ ಹೊಂದಿದ ಭಾರತ ಇದೇ ಕಾರಣಕ್ಕಾಗಿ ನಲುಗುತ್ತದೆ. ಆಗ ಭಾರತ ಒಬ್ಬಂಟಿ ಅನಿಸುತ್ತದೆ. ಈ ಎಲ್ಲ ಯೋಜಿತ ಭಯೋತ್ಪಾದನೆ ನಡುವೆ ನಲುಗುವುದು ಶ್ರೀಸಾಮಾನ್ಯರು.ಇವರ ದನಿ ಕ್ಷೀಣ. ಶ್ರೀಸಾಮಾನ್ಯ ಭಯೋತ್ಪಾದನೆಗೆ ಸಡ್ಡು ಹೊಡೆದರೆ?ಇಂಥದೊಂದು ಪರಿಕಲ್ಪನೆ ಇಟ್ಟುಕೊಂಡು ರಚಿತವಾದ ಸಿನೆಮಾ ಎ.ವೆಡ್ನೆಸ್ ಡೆ.ನೀರಜ್ ಪಾಂಡೆ ಕಥೆ-ಚಿತ್ರಕಥೆ ರಚಿಸಿ ನಿರ್ದೆಶಿಸಿದ ಚಿತ್ರವಿದು.ಎಲ್ಲಿಯೂ ಚಿತ್ರಕಥೆ ಜಾಳು-ಜಾಳಾಗಿಲ್ಲ.ಹಿಗಾಗಿ ಚಿತ್ರದ ಟೆಂಫೋ ಏರುಗತಿಯಲ್ಲಿ ಸಾಗುತ್ತದೆ.ಅತ್ಯುತ್ತಮ ಭೂಮಿಕೆ ಸಿದ್ದಪಡಿಸುವ ಶ್ರೀಸಾಮಾನ್ಯ ಕೊನೆಕ್ಷಣದವರೆಗೂ ತನ್ನ ನಿಜ ಉದ್ದೇಶ ಬಿಟ್ಟುಕೊಡುವುದಿಲ್ಲ. ತನ್ನ ಉದ್ದೇಶಿತ ಗುರಿ ತಲುಪಲು ಶಕ್