Skip to main content

ಭಯೋತ್ಪಾದನೆ ಆಯಾಮಗಳು....


ಭಯೋತ್ಪಾದನೆಗೆ ನಾನಾ ಆಯಾಮ.ಧರ್ಮ,ರಾಜಕೀಯ,ಆರ್ಥಿಕ,ಸಾಮಾಜಿಕ.ವೈಯಕ್ತಿಕ ಅರ್ಥ ಸಂಪಾದನೆ ತಳಹದಿ.ಇದಕ್ಕೆ ಧರ್ಮರಾಜಕಾರಣದ ಇಂಬು.ಭಯೋತ್ಪಾದನೆಯಲೀಗ ಇದರದೇ ಪ್ರಾಬಲ್ಯ.ಶತಶತಮಾನಗಳಿಂದ ಭಯೋತ್ಪಾದನೆ ಚಾಲ್ತಿಯಲ್ಲಿದೆ.ಅದರ ಸ್ವರೂಪಗಳು ವಿಭಿನ್ನ.ಆಯುಧ ವಿಜ್ಞಾನ ಪ್ರಗತಿಯಾದಂತೆಲ್ಲ ಭಯೋತ್ಪದನೆ ವಿಜೃಂಭಿಸುತ್ತಿದೆ.ಭಯೋತ್ಪಾದಕರನ್ನು ಮಟ್ಟಹಾಕುವಲ್ಲಿಯೂ ವಿಶ್ವರಾಜಕಾರಣದ ನುಸುಳುವಿಕೆ. ಭಾರತದೊಂದಿಗೆ ಜಂಟಿ ಸಮರಭ್ಯಾಸ ಮಾಡುತ್ತದೆ ಚೀನಾ. ಇದೇ ವೇಳೆ ಪಾಕಿಸ್ತಾನದ ಮೇಲಿನ ಆರೋಪಗಳಿಗೆ ಆಕ್ಷೇಪವನ್ನೂ ಎತ್ತುತ್ತದೆ.ಆಪ್ಘಾನೀಸ್ತಾನದ ಮೇಲೆ ದಂಡೇತ್ತಿ ಹೋಗುವ ಅಮೆರಿಕ ನವರಂಗಿ ಆಟವಾಡುತ್ತದೆ.ಈ ಸಂದರ್ಭದಲ್ಲಿ ಅತ್ಯುತ್ತಮ ವಿದೇಶಾಂಗ ನೀತಿ ಹೊಂದಿದ ಭಾರತ ಇದೇ ಕಾರಣಕ್ಕಾಗಿ ನಲುಗುತ್ತದೆ. ಆಗ ಭಾರತ ಒಬ್ಬಂಟಿ ಅನಿಸುತ್ತದೆ.

ಈ ಎಲ್ಲ ಯೋಜಿತ ಭಯೋತ್ಪಾದನೆ ನಡುವೆ ನಲುಗುವುದು ಶ್ರೀಸಾಮಾನ್ಯರು.ಇವರ ದನಿ ಕ್ಷೀಣ. ಶ್ರೀಸಾಮಾನ್ಯ ಭಯೋತ್ಪಾದನೆಗೆ ಸಡ್ಡು ಹೊಡೆದರೆ?ಇಂಥದೊಂದು ಪರಿಕಲ್ಪನೆ ಇಟ್ಟುಕೊಂಡು ರಚಿತವಾದ ಸಿನೆಮಾ ಎ.ವೆಡ್ನೆಸ್ ಡೆ.ನೀರಜ್ ಪಾಂಡೆ ಕಥೆ-ಚಿತ್ರಕಥೆ ರಚಿಸಿ ನಿರ್ದೆಶಿಸಿದ ಚಿತ್ರವಿದು.ಎಲ್ಲಿಯೂ ಚಿತ್ರಕಥೆ ಜಾಳು-ಜಾಳಾಗಿಲ್ಲ.ಹಿಗಾಗಿ ಚಿತ್ರದ ಟೆಂಫೋ ಏರುಗತಿಯಲ್ಲಿ ಸಾಗುತ್ತದೆ.ಅತ್ಯುತ್ತಮ ಭೂಮಿಕೆ ಸಿದ್ದಪಡಿಸುವ ಶ್ರೀಸಾಮಾನ್ಯ ಕೊನೆಕ್ಷಣದವರೆಗೂ ತನ್ನ ನಿಜ ಉದ್ದೇಶ ಬಿಟ್ಟುಕೊಡುವುದಿಲ್ಲ. ತನ್ನ ಉದ್ದೇಶಿತ ಗುರಿ ತಲುಪಲು ಶಕ್ತನಾಗುತ್ತಾನೆ.ಈ ಮೂಲಕ ಚಿತ್ರ ಸಾರ್ಥಕ ಮೇಸೆಜ್ ಪಾಸ್ ಮಾಡುತ್ತದೆ.ಇಲ್ಲಿನ ಹಿರೋ ಓರ್ವ ಪೊಲೀಸ್ ಇನ್ಸ್ ಪೆಕ್ಟರ್. ಈತನ ಹೆಸರು ಆರೀಫ್ ಖಾನ್...!

Comments

  1. ಕುಮಾರ್ ದುರದೃಷ್ಟವಶಾತ್ ಭಾರತದ ಆರ್ಥಿಕ ಮತ್ತು ವೈಜ್ಞಾನಿಕ ಪ್ರಗತಿಯನ್ನು ಈರ್ಷೆಯಿಂದ ಗಮನಿಸುತ್ತಿರುವ ಹೊಟ್ಟೆಕಿಚ್ಚಿನ ಅಮೇರಿಕಾ ಆಗಲಿ ಚೀನಾ ಆಗಲಿ ಭಯೋತ್ಪಾದನಾ ಸಮಸ್ಯೆಯನ್ನು ನಿಗ್ರಹಿಸುವಲ್ಲಿ ಮನಸಾರೆ ಸಹಾಯ ಮಾಡುತ್ತಿಲ್ಲ....

    ReplyDelete

Post a Comment

Popular posts from this blog

ಹೆಣ್ಣೆ, ನಿನ್ನ ಮತ್ತೊಂದು ಹೆಸರು ಚಂಚಲತೆಯೆ............?

'ಸನ್ ಮ್ಯೂಸಿಕ್' ವಾಹಿನಿಯಲ್ಲಿ 'ವಿನ್ನೈತಾಂಡಿ ವರುವಯ' ಚಿತ್ರದ ಹಾಡುಗಳು ಜನಪ್ರಿಯ. ಇವುಗಳನ್ನು ಆಗಾಗ ನೋಡುತ್ತಿದ್ದೆನಾದರೂ ಚಿತ್ರ ವೀಕ್ಷಿಸಿರಲಿಲ್ಲ.  ಮೊನ್ನೆ  ಈ ಚಿತ್ರದ ಡಿವಿಡಿ  ತಂದು ನೋಡಿದೆ. ಮೊದಲಿಗೆ ಇಡೀ ಚಿತ್ರದ ವ್ಯಾಕರಣ ಹೊಸತನವಿದೆ ಎನಿಸಿತು. ಇಡೀ ಚಿತ್ರವನ್ನು ಪ್ರೆಸೆಂಟ್ ಮಾಡಿರುವ ರೀತಿ ಬಗ್ಗೆ ಮೆಚ್ಚುಗೆ ಮೂಡಿತು. ಇವೆಲ್ಲದರ ಜೊತೆಗೆ ಕಥೆಯ ಹೂರಣ ಕೂಡ ವಿಭಿನ್ನವಾಗಿದೆ. ಫ್ಲಾಷ್ ಬ್ಯಾಕಿನ ಮೂಲಕ ಇಡೀ ಸ್ಟೋರಿಯನ್ನು ಕಥಾ ನಾಯಕ ನಿರೂಪಿಸುತ್ತಾ ಹೋಗುತ್ತಾನೆ. ಕಥಾ ನಾಯಕ ಕಾರ್ತಿಕ್ (ಸಿಂಬರಸನ್) ಇಂಜಿನಿಯರ್. ಆದರೀತನಿಗೆ ಸಿನೆಮಾ ಬಗ್ಗೆ ತೀವ್ರ ಆಸಕ್ತಿ. ಸ್ನೇಹಿತರ ಮೂಲಕ ಪರಿಚಯವಾದ  ಸಿನಿಮಾ ಕ್ಯಾಮರಾಮನ್ ಗಣೇಶ್(ಗಣೇಶ್) ತಮ್ಮ ಪ್ರಭಾವ ಬಳಸಿ ಖ್ಯಾತ ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕರಾಗಿ ಸೇರಿಸುತ್ತಾರೆ. ಒಮ್ಮೆ ತಾವಿರುವ ಬಾಡಿಗೆ ಮನೆ ಗೇಟಿನ ಬಳಿ ಕಾರ್ತೀಕ್ ನಿಂತಿದ್ದಾಗ ಸೀರೆಯುಟ್ಟ ಯುವತಿಯೋರ್ವಳು ತೀರಾ ಬೇಗವೂ ಅಲ್ಲದ ನಿಧಾನವೂ ಅಲ್ಲದ ರೀತಿ ನಡೆದು ಬರುತ್ತಿರುವುದನ್ನು ನೋಡುತ್ತಾನೆ. ನೋಡುತ್ತಾ ನೋಡುತ್ತಾ ಈತನ ಕಣ್ಣುಗಳಲ್ಲಿ ಮಿಂಚು. 'love at first sight' ಭಾವನೆ. ಆಕೆ ಗೇಟ್ ತೆರೆದು ಈತನಿರುವ ಮನೆಯ ಮೊದಲ ಮಹಡಿಗೆ ತೆರಳುತ್ತಾನೆ. ಬಳಿಕ ಈತನ ಸಹೋದರಿ ಮೂಲಕ ಆಕೆ, ಮಲೆಯಾಳಿ ಮನೆ ಮಾಲೀಕರ ಮಗಳು ಜೆಸ್ಸಿ (ತ್ರಿಷಾ) ಎನ್ನುವುದು ತಿಳಿದು ಬರುತ್ತದೆ. ...

ಕಪ್ಪಾಗಿದ್ದರೆ ಕೊರಗೇಕೆ....?

ಟಿ.ವಿ.ಚಾನಲ್ ಗಳ ಸುದ್ದಿವಾಚಕಿಯರ ಮೇಕಪ್ ಹೆಚ್ಚಾಗಿರುತ್ತದೆ.ಅದರಲ್ಲೂ ಪ್ರಾಂತೀಯ ಭಾಷೆಗಳವರಲ್ಲಿ ಮೇಕಪ್ ಮತ್ತಷ್ಟು ಹೆಚ್ಚಾಗಿರುತ್ತದೆ. ಕಪ್ಪಗಿರುವ ವಾಚಕಿಯರಂತು ಮುಂಗೈಗೂ ಮೇಕಪ್ ಮಾಡಿಸಿಕೊಂಡಿರುತ್ತಾರೆ.ಆದರೆ ಇವರ ಕುತ್ತಿಗೆ,ಕಿವಿಗಳಿಗೆ ಮೇಕಪ್ ಟಚ್ ಕೊಡುವುದನ್ನು ಮೇಕಪ್ ಮ್ಯಾನ್ ಮರೆತಿರುತ್ತಾನೆ. ಇದರಿಂದ ಸ್ಟುಡಿಯೋದ ಪ್ರಖರ ಬೆಳಕಿನಲ್ಲಿ ಈ ವಾಚಕಿಯರು ವಿಚಿತ್ರವಾಗಿ ಕಾಣುತ್ತಿರುತ್ತಾರೆ.ಅದರಲ್ಲೂ ಕ್ಯಾಮರಾ ಕ್ಲೋಸ್ ಅಪ್ ತುಸು ಹೆಚ್ಚಾಗಿದ್ದರಂತೂ ಇನ್ನೂ ಅಸಹಜತೆ. .ಇಂಥ ವಾಚಕಿಯರು ಲೋಕಾಭಿರಾಮವಾಗಿ ಮಾತನಾಡುವಾಗ "ಅಯ್ಯೋ ತಾವು ಬೆಳ್ಳಗಿರಬೇಕಿತ್ತು ಎಂದು ಕೊರಗುತ್ತಿರುತ್ತಾರೆ.ಇಂಥದ್ದೇ ಮನೋಭಾವ ವಾರ್ತಾವಾಚಕಿಯರ ಆಯ್ಕೆಸಮಿತಿ ನಿರ್ಣಾಯಕರಿಗೆ ಇದ್ದಿದ್ದರೆ ಕಪ್ಪನೆಯವರು ಖಂಡಿತಾ ಆಯ್ಕೆಯಾಗುತ್ತಿರಲ್ಲಿಲ್ಲ ಎಂಬ ಸಂಗತಿಯನ್ನಿವರು ಮರೆತಿರುತ್ತಾರೆ.ನಿಜಕ್ಕೂ ಈ ವಾರ್ತಾ ವಾಚಕಿಯರು ಆಕರ್ಷಕವಾಗಿಯೇ ಇರುತ್ತಾರೆ.ಆದರೂ ಕೀಳಿರಿಮೆ ಕಪ್ಪಾಗಿದ್ದರೆ ಕೊರಗುವ ಮನೋಭಾವ ಭಾರತೀಯರಲ್ಲಿ ಎಂದಿನಿಂದ ಪ್ರಾರಂಭವಾಯಿತು ಎಂಬುದೇ ದೊಡ್ಡ ಪ್ರಶ್ನೆ.ಈ ಪ್ರವೃತ್ತಿಯಿಂದ ತಾವ್ಯಾಕೆ ಹೀಗೆ ಹುಟ್ಟಿದೆವೋ ಎಂಬಷ್ಟು ಕೀಳರಿಮೆ ಕಪ್ಪನೆ ಹೆಣ್ಣುಗಳಲ್ಲಿ ಮನೆಮಾಡಿರುತ್ತದೆ.ಇವರಿಗೆ ಹೋಲಿಸಿದರೆ ಕಪ್ಪನೆ ಗಂಡುಗಳಲ್ಲಿ ಇಂಥ ಕೀಳಿರಿಮೆ ಕಡಿಮೆ.ಇದು ಹೆಣ್ಣು-ಗಂಡಿನ ಕುರಿತ ಭಾರತಿಯ ಸಮಾಜದ ಪೂರ್ವಾಗ್ರಹ ಪೀಡಿತ ಭಾವನೆಗೂ ನಿದರ್ಶನ.ಸಾಮಾನ್ಯವಾಗ...

ಕನ್ನಡದ ಕತ್ತು ಹಿಚುಕುತ್ತಿರುವ ಕೇರಳ ಸರಕಾರ…!?

ಶೀರ್ಷಿಕೆ ಓದಿದಾಗ ಆಶ್ವರ್ಯ-ಪ್ರಶ್ನಾರ್ಥಕ ಭಾವಗಳು ಮೂಡುವುದು ಸಹಜ. ಆದರೆ ‘ಕನ್ನಡದ ಕತ್ತು ಹಿಚುಕುತ್ತಿರುವ ಕೇರಳ ಸರಕಾರ ಎನ್ನುವುದು ಅಕ್ಷರಶಃ ಸತ್ಯ. ಗಡಿ ಅಂಚಿನ ಕಾಸರಗೋಡಿನಿಂದ ಕನ್ನಡಕ್ಕೆ ಸ್ಥಾನವೇ ಇಲ್ಲದಂತೆ ಮಾಡುವ ನಿಟ್ಟಿನಲ್ಲಿ ಆ ಸರಕಾರ ನಾನಾ ಬಗೆಯ ತಂತ್ರಗಾರಿಕೆಯನ್ನು ಮಾಡುತ್ತಲೇ ಬಂದಿದೆ. ಭಾಷಾವಾರು ಪ್ರಾಂತ್ಯ ರಚನೆಯಾಗಿ 54 ವರ್ಷ ಸಂದರೂ ಕಾಸರಗೋಡಿನಲ್ಲಿ ಕನ್ನಡ ಉಳಿದಿರುವುದನ್ನು ಕಂಡು ಈ ಬಾರಿ ಪ್ರಬಲ ಅಸ್ತ್ತ ಪ್ರಯೋಗಿಸಿದೆ. ಇದಕ್ಕೆ ತಕ್ಕ ಪ್ರತ್ಯಸ್ತ್ರ ಹೂಡದೇ ಇದ್ದರೆ ಸಂಭವಿಸುವ ಅಪಾಯಗಳು ಅನೇಕ. ಅವುಗಳೇನು…..? ಬದಿಯಡ್ಕ ಶಾಲಾ ಮಕ್ಕಳು   2011ರ ಜುಲೈ 8 ರಿಂದ 17ರವರೆಗೆ ಕೇರಳದಲ್ಲಿನ ಕನ್ನಡ ಪ್ರಾಂತ್ಯಗಳಾದ ಕಾಸರಗೋಡು-ಹೊಸದುರ್ಗಗಳಲ್ಲಿ ಕ್ಷೇತ್ರ ಪ್ರವಾಸದಲ್ಲಿದ್ದೆ. ಎಂದಿನಂತೆ ಕನ್ನಡ ಭಾಷಾ ಚಳವಳಿಗಾರನ್ನು ಭೇಟಿಯಾದೆ. ‘ಕನ್ನಡಕ್ಕೆ ಭಾರಿ ಅಪಾಯ ತಂದೊಡ್ಡುವ ಕ್ರಮವನ್ನು ಕೇರಳ ಸರಕಾರ ಜರುಗಿಸಿದೆ. ಇದರಿಂದ ಕಾಸರಗೋಡಿನ ಕನ್ನಡದ ಕತ್ತು ಹಿಚುಕಿದಂತಾಗುತ್ತದೆ. ಕೆಲವೇ ವರ್ಷಗಳಲ್ಲಿ ಇಲ್ಲಿನ ಕನ್ನಡ ಸಂಸ್ಕೃತಿ ಕಣ್ಮರೆಯಾಗಲಿದೆ ಎಂಬ ಆತಂಕವನ್ನು ಮುಳ್ಳೇರಿಯಾದ ಆಯುರ್ವೇದ ವೈದ್ಯ ನರೇಶ್ ಮತ್ತು ಕಾಸರಗೋಡಿನ ಸರಕಾರಿ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ರತ್ನಕರ ಮಲ್ಲಮೂಲೆ ಅವರು ವ್ಯಕ್ತಪಡಿಸಿದರು.  ಕನ್ನಡ ಭಾಷಾ ಶಾಲೆಗಳಲ್ಲಿ 10ನೇ ತರಗತಿವರೆಗೆ ಎರಡನೇ ಭಾಷೆಯಾಗಿ ಮಲೆಯಾಳಂ ಕಲಿಸಬೇಕು-ಕಲ...