'ಸನ್ ಮ್ಯೂಸಿಕ್' ವಾಹಿನಿಯಲ್ಲಿ 'ವಿನ್ನೈತಾಂಡಿ ವರುವಯ' ಚಿತ್ರದ ಹಾಡುಗಳು ಜನಪ್ರಿಯ. ಇವುಗಳನ್ನು ಆಗಾಗ ನೋಡುತ್ತಿದ್ದೆನಾದರೂ ಚಿತ್ರ ವೀಕ್ಷಿಸಿರಲಿಲ್ಲ. ಮೊನ್ನೆ ಈ ಚಿತ್ರದ ಡಿವಿಡಿ ತಂದು ನೋಡಿದೆ. ಮೊದಲಿಗೆ ಇಡೀ ಚಿತ್ರದ ವ್ಯಾಕರಣ ಹೊಸತನವಿದೆ ಎನಿಸಿತು. ಇಡೀ ಚಿತ್ರವನ್ನು ಪ್ರೆಸೆಂಟ್ ಮಾಡಿರುವ ರೀತಿ ಬಗ್ಗೆ ಮೆಚ್ಚುಗೆ ಮೂಡಿತು. ಇವೆಲ್ಲದರ ಜೊತೆಗೆ ಕಥೆಯ ಹೂರಣ ಕೂಡ ವಿಭಿನ್ನವಾಗಿದೆ. ಫ್ಲಾಷ್ ಬ್ಯಾಕಿನ ಮೂಲಕ ಇಡೀ ಸ್ಟೋರಿಯನ್ನು ಕಥಾ ನಾಯಕ ನಿರೂಪಿಸುತ್ತಾ ಹೋಗುತ್ತಾನೆ.
ಕಥಾ ನಾಯಕ ಕಾರ್ತಿಕ್ (ಸಿಂಬರಸನ್) ಇಂಜಿನಿಯರ್. ಆದರೀತನಿಗೆ ಸಿನೆಮಾ ಬಗ್ಗೆ ತೀವ್ರ ಆಸಕ್ತಿ. ಸ್ನೇಹಿತರ ಮೂಲಕ ಪರಿಚಯವಾದ ಸಿನಿಮಾ ಕ್ಯಾಮರಾಮನ್ ಗಣೇಶ್(ಗಣೇಶ್) ತಮ್ಮ ಪ್ರಭಾವ ಬಳಸಿ ಖ್ಯಾತ ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕರಾಗಿ ಸೇರಿಸುತ್ತಾರೆ. ಒಮ್ಮೆ ತಾವಿರುವ ಬಾಡಿಗೆ ಮನೆ ಗೇಟಿನ ಬಳಿ ಕಾರ್ತೀಕ್ ನಿಂತಿದ್ದಾಗ ಸೀರೆಯುಟ್ಟ ಯುವತಿಯೋರ್ವಳು ತೀರಾ ಬೇಗವೂ ಅಲ್ಲದ ನಿಧಾನವೂ ಅಲ್ಲದ ರೀತಿ ನಡೆದು ಬರುತ್ತಿರುವುದನ್ನು ನೋಡುತ್ತಾನೆ. ನೋಡುತ್ತಾ ನೋಡುತ್ತಾ ಈತನ ಕಣ್ಣುಗಳಲ್ಲಿ ಮಿಂಚು. 'love at first sight' ಭಾವನೆ. ಆಕೆ ಗೇಟ್ ತೆರೆದು ಈತನಿರುವ ಮನೆಯ ಮೊದಲ ಮಹಡಿಗೆ ತೆರಳುತ್ತಾನೆ. ಬಳಿಕ ಈತನ ಸಹೋದರಿ ಮೂಲಕ ಆಕೆ, ಮಲೆಯಾಳಿ ಮನೆ ಮಾಲೀಕರ ಮಗಳು ಜೆಸ್ಸಿ (ತ್ರಿಷಾ) ಎನ್ನುವುದು ತಿಳಿದು ಬರುತ್ತದೆ. ...
Comments
Post a Comment