ಅನ್ಯಾಯವಾಗಿ
ಕೇರಳಕ್ಕೆ ಸೇರಿರುವ ಕಾಸರಗೋಡಿನ ಕನ್ನಡಿಗರ ಮೂಗಿನವರೆಗೂ ಮಲೆಯಾಳಿ ಮುಳುಗು ನೀರು ಬಂದಿದೆ. ಇದನ್ನು
ಪ್ರತಿಭಟಿಸದಿದ್ದರೆ ಇಲ್ಲಿ ಕನ್ನಡ ಸಂಪೂರ್ಣ ಮುಳುಗಿ ಹೋಗುತ್ತದೆ ಎಂದು ಅಲ್ಲಿನ ಕನ್ನಡಿಗರು ಅರಿತಿದ್ದಾರೆ.
ಪ್ರತಿಭಟನೆಗಳನ್ನು ತೀವ್ರಗೊಳಿಸಿದ್ದಾರೆ. ಈ ಕುರಿತ ವಿವರಕ್ಕೆ ತೆರಳುವ ಮುನ್ನ ಕೆಲ ದಿನಗಳ ಹಿಂದೆ 'ಸಂಕಥೆ' ಯಲ್ಲಿ ಪ್ರಕಟವಾದ ಕನ್ನಡದ
ಕತ್ತು ಹಿಚುಕುತ್ತಿರುವ ಕೇರಳ ಸರಕಾರ…!? ಲೇಖನಕ್ಕೆ ಬಂದ ಪ್ರತಿಕ್ರಿಯೆಗಳನ್ನು ಗಮನಿಸಿ.
ಕಾಸರಗೋಡು ನಿವಾಸಿಗಳ ನೋವು ವ್ಯಕ್ತವಾಗಿದೆ. ಇದಲ್ಲದೆ ಸಮಸ್ಯೆಯ ತಳಸ್ಪರ್ಶಿ ಅರಿವು ಇಲ್ಲದವರು ನೀಡಿದ ಅಭಿಪ್ರಾಯಗಳಿವೆ
Anand
Shetty said...
1.ಇನ್ನಾದರೂ
ಕನ್ನಡಿಗರೆಲ್ಲ ಎಚ್ಚೆತ್ತುಕೊಳ್ಳಬೇಕು , ನಮ್ಮ ಸರ್ಕಾರವು ಎಚ್ಚೆತ್ತುಕೊಂಡು
ಸ್ವಲ್ಪ ಗಮನಹರಿಸಬೇಕಿದೆ .
Anonymous
said...
2.
ಮಲಯಾಳ ಭಾಷೆ , ಸಾಹಿತ್ಯದ ಬಗ್ಗೆ ನನಗೆ ಗೌರವವಿದೆ .
ಕಾಸರಗೋಡಿನ ಹಳೆಯ ತಲೆಮಾರಿನ ಮತ್ತು
ಇಂದಿನ ಹಲವರು ಸ್ಥಳೀಯ ಮಲಯಾಳಿಗಳು
ಇಲ್ಲಿನ ತುಳು ಕನ್ನಡ ಮೊದಲಾದ
ಸ್ಥಳೀಯ ಸಾಂಸ್ಕೃತಿಕ ವೈವಿಧ್ಯವನ್ನು ಗೌರವಿಸುತ್ತಾರೆ . ಆದರೆ ವಲಸೆ ಬಂದ
ಬರುತ್ತಿರುವ ತೆಂಕಣದ ಮಲಯಾಳಿಗಳಿಗೆ ಕಾಸರಗೋಡಿನ
ಬಗ್ಗೆ ಪ್ರೀತಿ ಇಲ್ಲ . ಇಲ್ಲಿನ
ಭಾಷಾ ಸಾಮರಸ್ಯವನ್ನು ನಾಶ ಮಾಡುವವರು ಅವರೇ...