Skip to main content

Posts

ಕಾಸರಗೋಡು ಕನ್ನಡಿಗರ ಹೋರಾಟ ಮತ್ತು ಬಲಿದಾನಗಳನ್ನು ಕರ್ನಾಟಕ ಸರ್ಕಾರ ಮರೆತಿದೆಯೇ...?

" ಕಾಸರಗೋಡು, ಕರ್ನಾಟಕದ ಕನ್ಯಾಕುಮಾರಿ. ಉತ್ತರದಲ್ಲಿ ಬೆಳಗಾವಿ, ಬಳ್ಳಾರಿಗಳಂತೆ ದಕ್ಷಿಣ ಕನ್ನಡದಲ್ಲಿ ನಮ್ಮದು ಕರ್ನಾಟಕದ ಕನ್ಯಾಕುಮಾರಿ. ಕನ್ನಡನಾಡಿನ ಈ ತೆಂಕಣ ಬಾಗಿಲನ್ನು ತೆರೆದಿಟ್ಟು ಕನ್ನಡಿಗರು ಎಚ್ಚರತಪ್ಪಿ ನಿದ್ರೆ ಹೋದುದ್ದೇ ಆದರೆ ನಮ್ಮ ಜನರಿಗೂ, ನಮ್ಮ ನಾಡಿಗೂ ಅಮೂಲ್ಯವಾದ ಕನ್ನಡ ಸಂಸ್ಕೃತಿಗೂ ಪ್ರಮಾದ ಒದಗುವುದರಲ್ಲಿ ಸಂಶಯವಿಲ್ಲ. ವಿಶಾಲ ಕೇರಳ ಚಳವಳಿಯು ಆರಂಭವಾಗಿ ಹತ್ತು ವರ್ಷಗಳು ಸಂದುಹೋದವು. ದಕ್ಷಿಣ ಕನ್ನಡ, ಕೊಡಗು, ನೀಲಗಿರಿ ಜಿಲ್ಲೆಗಳು ಮಲಬಾರಿನೊಂದಿಗೆ ಜತೆಗೊಂಡು ಕೇರಳ ಸಂಸ್ಥಾನ ಅಥವಾ ಪಶ್ಚಿಮ ಪ್ರಾಂತ ಸಂಸ್ಥಾನವೊಂದು ನಿರ್ಮಾಣವಾಗಬೇಕೆಂದು ಈ ಚಳವಳಿಯು ಪ್ರಬಲವಾಗುತ್ತಾ ನಡೆದಿದೆ. ಈ ಚಳವಳಿಯ ಮರ್ಮವನ್ನು ತಿಳಿದುಕೊಂಡು ಕನ್ನಡಿಗರು ಅದನ್ನು ಸಕಾಲದಲ್ಲಿಯೇ ಪ್ರತಿಭಟಿಸದೇ ಹೋದರೆ ಸ್ವಲ್ಪಕಾಲದೊಳಗಾಗಿಯೇ ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡಾದರೂ ಮಲಬಾರಿನವರ ಮಡಿಲಿಗೆ ಬೀಳಬೇಕಾಗಬಹುದು" ¨sÁµÁªÁgÀÄ ¥ÁæAvÀå gÀZÀ£ÉAiÀiÁUÀĪÀÅzÀPÀÆÌ MA¨sÀvÀÄÛ ªÀµÀðUÀ½UÀÆ ªÉÆzÀ¯Éà ²æÃzsÀgÀ PÀQ̯ÁAiÀÄgÀÄ ºÉýzÀÝ RavÀ C©ü¥ÁæAiÀÄ«zÀÄ. EªÀgÀÄ PÁ¸ÀgÀUÉÆÃr£À ¸ÀÄ¥Àæ¹zÀÞ ªÀQîgÁVzÀÝgÀÄ. PÁ¸ÀgÀUÉÆÃqÀ£ÀÄß PÀ£ÁðlPÀPÉÌ ¸ÉÃ¥ÀðqÉUÉÆ½¸À®Ä ¸ÀvÀvÀ 25 ªÀµÀð ºÉÆÃgÁl ªÀiÁrzÀgÀÄ. CªÀgÀ fëvÁªÀ¢üAiÀĪÀgÉUÀÆ F ºÉÆÃgÁlzÀ°è ¸ÀQæAiÀÄgÁVzÀÝgÀÄ. 1947g...

ಭಯೋತ್ಪಾದನೆ ಆಯಾಮಗಳು....

ಭಯೋತ್ಪಾದನೆಗೆ ನಾನಾ ಆಯಾಮ.ಧರ್ಮ,ರಾಜಕೀಯ,ಆರ್ಥಿಕ,ಸಾಮಾಜಿಕ.ವೈಯಕ್ತಿಕ ಅರ್ಥ ಸಂಪಾದನೆ ತಳಹದಿ.ಇದಕ್ಕೆ ಧರ್ಮರಾಜಕಾರಣದ ಇಂಬು.ಭಯೋತ್ಪಾದನೆಯಲೀಗ ಇದರದೇ ಪ್ರಾಬಲ್ಯ.ಶತಶತಮಾನಗಳಿಂದ ಭಯೋತ್ಪಾದನೆ ಚಾಲ್ತಿಯಲ್ಲಿದೆ.ಅದರ ಸ್ವರೂಪಗಳು ವಿಭಿನ್ನ.ಆಯುಧ ವಿಜ್ಞಾನ ಪ್ರಗತಿಯಾದಂತೆಲ್ಲ ಭಯೋತ್ಪದನೆ ವಿಜೃಂಭಿಸುತ್ತಿದೆ.ಭಯೋತ್ಪಾದಕರನ್ನು ಮಟ್ಟಹಾಕುವಲ್ಲಿಯೂ ವಿಶ್ವರಾಜಕಾರಣದ ನುಸುಳುವಿಕೆ. ಭಾರತದೊಂದಿಗೆ ಜಂಟಿ ಸಮರಭ್ಯಾಸ ಮಾಡುತ್ತದೆ ಚೀನಾ. ಇದೇ ವೇಳೆ ಪಾಕಿಸ್ತಾನದ ಮೇಲಿನ ಆರೋಪಗಳಿಗೆ ಆಕ್ಷೇಪವನ್ನೂ ಎತ್ತುತ್ತದೆ.ಆಪ್ಘಾನೀಸ್ತಾನದ ಮೇಲೆ ದಂಡೇತ್ತಿ ಹೋಗುವ ಅಮೆರಿಕ ನವರಂಗಿ ಆಟವಾಡುತ್ತದೆ.ಈ ಸಂದರ್ಭದಲ್ಲಿ ಅತ್ಯುತ್ತಮ ವಿದೇಶಾಂಗ ನೀತಿ ಹೊಂದಿದ ಭಾರತ ಇದೇ ಕಾರಣಕ್ಕಾಗಿ ನಲುಗುತ್ತದೆ. ಆಗ ಭಾರತ ಒಬ್ಬಂಟಿ ಅನಿಸುತ್ತದೆ. ಈ ಎಲ್ಲ ಯೋಜಿತ ಭಯೋತ್ಪಾದನೆ ನಡುವೆ ನಲುಗುವುದು ಶ್ರೀಸಾಮಾನ್ಯರು.ಇವರ ದನಿ ಕ್ಷೀಣ. ಶ್ರೀಸಾಮಾನ್ಯ ಭಯೋತ್ಪಾದನೆಗೆ ಸಡ್ಡು ಹೊಡೆದರೆ?ಇಂಥದೊಂದು ಪರಿಕಲ್ಪನೆ ಇಟ್ಟುಕೊಂಡು ರಚಿತವಾದ ಸಿನೆಮಾ ಎ.ವೆಡ್ನೆಸ್ ಡೆ.ನೀರಜ್ ಪಾಂಡೆ ಕಥೆ-ಚಿತ್ರಕಥೆ ರಚಿಸಿ ನಿರ್ದೆಶಿಸಿದ ಚಿತ್ರವಿದು.ಎಲ್ಲಿಯೂ ಚಿತ್ರಕಥೆ ಜಾಳು-ಜಾಳಾಗಿಲ್ಲ.ಹಿಗಾಗಿ ಚಿತ್ರದ ಟೆಂಫೋ ಏರುಗತಿಯಲ್ಲಿ ಸಾಗುತ್ತದೆ.ಅತ್ಯುತ್ತಮ ಭೂಮಿಕೆ ಸಿದ್ದಪಡಿಸುವ ಶ್ರೀಸಾಮಾನ್ಯ ಕೊನೆಕ್ಷಣದವರೆಗೂ ತನ್ನ ನಿಜ ಉದ್ದೇಶ ಬಿಟ್ಟುಕೊಡುವುದಿಲ್ಲ. ತನ್ನ ಉದ್ದೇಶಿತ ಗುರಿ ತಲುಪಲು ಶಕ್...

ಮೇಕಪ್ ಬೇಕೆ.....?

ನೀವು, ಈಸ್ಟ್ ಮನ್ ಕಲರ್ ಸಿನೆಮಾಗಳನ್ನು ನೋಡಿರಬಹುದು.ಪಾತ್ರಧಾರಿಗಳ ವೇಷ-ಭೂಷಣ,ಸೆಟ್ಟು ಎಲ್ಲವೂ ತುಂಬ ರಂಗು ರಂಗು.ಪಾತ್ರಧಾರಿಗಳ ಮೇಕಪ್ ಅಂತೂ,ಎಳೆಯ ಮಕ್ಕಳು ಮುಖ-ಮೈ-ಕೈಗೆಲ್ಲ ಬಣ್ಣ ಬಳಿದುಕೊಂಡಂತೆ.ಇದಕ್ಕೆ ಕಾರಣವೆನೆಂದರೆ ಬಹುತೇಕ ನಿರ್ದೇಶಕರು, ಕಲಾವಿದರು,ಮೇಕಪ್ ಮ್ಯಾನ್ಸ್,ಕಪ್ಪು-ಬಿಳುಪ್ಪು ಮತ್ತು ಈಸ್ಟ್ ಮನ್ ಕಲರ್ ನಡುವಿನ ಸೂಕ್ಷ್ಮತೆ ಅರಿಯದೇ ಹೋಗಿದ್ದು.ಕಪ್ಪು-ಬಿಳುಪ್ಪು ಕಾಲದ ಮೇಕಪ್ ರಂಗು,ಪ್ರೇಕ್ಷಕರಿಗೆ ರಾಚುತ್ತಿರಲಿಲ್ಲ.ಈ ಮೇಕಪ್ ಮತ್ತು ಆಗ ಬಳಸಿತ್ತಿದ್ದ ಲೈಟ್ಸ್ ಗಳಿಗೂ ಮ್ಯಾಚ್ ಆಗಿ ಕಲಾವಿದರು ಸುಂದರವಾಗಿಯೇ ಕಾಣುತ್ತಿದ್ದರು.ಈ ಮ್ಯಾಚಿಂಗ್ ಅನ್ನೇ ಈಸ್ಟ್ ಮನ್ ಕಲರ್ ನಲ್ಲಿಯೂ ಬಯಸಿದ್ದರಿಂದ ರಂಗು ಅಗತ್ಯಕ್ಕಿಂತಲೂ ಹೆಚ್ಚಾಗಿತ್ತು.ಇದರಲ್ಲಿ ಕಲಾವಿದರ ಭಾವಾಭಿವ್ಯಕ್ತಿ,  ಸೂಕ್ಷ್ಮತೆ ಮರೆಯಾಗಿತ್ತು. ಈಸ್ಟ್ ಮನ್ ನಂತರ ಟೆಕ್ನಿ ಕಲರ್ ಸಿನೆಮಾ ಬಂತು.ಆಗಲೂ ಮೇಕಪ್ ತೀವ್ರತೆ ಕಡಿಮೆಯಾಗಲಿಲ್ಲ.ಕಪ್ಪು-ಬಿಳುಪು ಮತ್ತು ಈಸ್ಟ್ ಮನ್ ಹಂತಗಳಿಗಿಂತಲೂ ಸೂಕ್ಷ್ಮ ಕ್ಯಾಮರಾಗಳು ಬಂದರೂ ಇವುಗಳನ್ನು ನೆರಳು-ಬೆಳಕು ಸಂಯೋಜನೆಯಲ್ಲಿ ಸಮರ್ಥವಾಗಿ ಬಳಸಿಕೊಂಡವರು ಕೆಲವರು ಮಾತ್ರ.ಇಂಥವರ ಸಿನೆಮಾಗಳಲ್ಲಿ ಮಾತ್ರ ಮೇಕಪ್ ಸಮಂಜಸ ಎನ್ನುವ ರೀತಿಯಲ್ಲಿತ್ತು.ನಂತರ ಆರ್.ಬಿ.ತದನಂತರ ಆರ್.ಜಿ.ಬಿ.ಕಲರ್ ಮತ್ತು ಶಕ್ತಿಶಾಲಿ ಕ್ಯಾಮರಾ ಮತ್ತು ಲೆನ್ಸ್ ಗಳ ಹಂತದಲ್ಲಿ ಮೇಕಪ್ ಗೊಡವೆ ಬೇಡ ಎಂದು ನಿರ್ಧರಿಸಿದವರು ಬೆರಳೆಣಿಕೆಯಷ್ಟು ನಿರ್ದೇ...

ಕಪ್ಪಾಗಿದ್ದರೆ ಕೊರಗೇಕೆ....?

ಟಿ.ವಿ.ಚಾನಲ್ ಗಳ ಸುದ್ದಿವಾಚಕಿಯರ ಮೇಕಪ್ ಹೆಚ್ಚಾಗಿರುತ್ತದೆ.ಅದರಲ್ಲೂ ಪ್ರಾಂತೀಯ ಭಾಷೆಗಳವರಲ್ಲಿ ಮೇಕಪ್ ಮತ್ತಷ್ಟು ಹೆಚ್ಚಾಗಿರುತ್ತದೆ. ಕಪ್ಪಗಿರುವ ವಾಚಕಿಯರಂತು ಮುಂಗೈಗೂ ಮೇಕಪ್ ಮಾಡಿಸಿಕೊಂಡಿರುತ್ತಾರೆ.ಆದರೆ ಇವರ ಕುತ್ತಿಗೆ,ಕಿವಿಗಳಿಗೆ ಮೇಕಪ್ ಟಚ್ ಕೊಡುವುದನ್ನು ಮೇಕಪ್ ಮ್ಯಾನ್ ಮರೆತಿರುತ್ತಾನೆ. ಇದರಿಂದ ಸ್ಟುಡಿಯೋದ ಪ್ರಖರ ಬೆಳಕಿನಲ್ಲಿ ಈ ವಾಚಕಿಯರು ವಿಚಿತ್ರವಾಗಿ ಕಾಣುತ್ತಿರುತ್ತಾರೆ.ಅದರಲ್ಲೂ ಕ್ಯಾಮರಾ ಕ್ಲೋಸ್ ಅಪ್ ತುಸು ಹೆಚ್ಚಾಗಿದ್ದರಂತೂ ಇನ್ನೂ ಅಸಹಜತೆ. .ಇಂಥ ವಾಚಕಿಯರು ಲೋಕಾಭಿರಾಮವಾಗಿ ಮಾತನಾಡುವಾಗ "ಅಯ್ಯೋ ತಾವು ಬೆಳ್ಳಗಿರಬೇಕಿತ್ತು ಎಂದು ಕೊರಗುತ್ತಿರುತ್ತಾರೆ.ಇಂಥದ್ದೇ ಮನೋಭಾವ ವಾರ್ತಾವಾಚಕಿಯರ ಆಯ್ಕೆಸಮಿತಿ ನಿರ್ಣಾಯಕರಿಗೆ ಇದ್ದಿದ್ದರೆ ಕಪ್ಪನೆಯವರು ಖಂಡಿತಾ ಆಯ್ಕೆಯಾಗುತ್ತಿರಲ್ಲಿಲ್ಲ ಎಂಬ ಸಂಗತಿಯನ್ನಿವರು ಮರೆತಿರುತ್ತಾರೆ.ನಿಜಕ್ಕೂ ಈ ವಾರ್ತಾ ವಾಚಕಿಯರು ಆಕರ್ಷಕವಾಗಿಯೇ ಇರುತ್ತಾರೆ.ಆದರೂ ಕೀಳಿರಿಮೆ ಕಪ್ಪಾಗಿದ್ದರೆ ಕೊರಗುವ ಮನೋಭಾವ ಭಾರತೀಯರಲ್ಲಿ ಎಂದಿನಿಂದ ಪ್ರಾರಂಭವಾಯಿತು ಎಂಬುದೇ ದೊಡ್ಡ ಪ್ರಶ್ನೆ.ಈ ಪ್ರವೃತ್ತಿಯಿಂದ ತಾವ್ಯಾಕೆ ಹೀಗೆ ಹುಟ್ಟಿದೆವೋ ಎಂಬಷ್ಟು ಕೀಳರಿಮೆ ಕಪ್ಪನೆ ಹೆಣ್ಣುಗಳಲ್ಲಿ ಮನೆಮಾಡಿರುತ್ತದೆ.ಇವರಿಗೆ ಹೋಲಿಸಿದರೆ ಕಪ್ಪನೆ ಗಂಡುಗಳಲ್ಲಿ ಇಂಥ ಕೀಳಿರಿಮೆ ಕಡಿಮೆ.ಇದು ಹೆಣ್ಣು-ಗಂಡಿನ ಕುರಿತ ಭಾರತಿಯ ಸಮಾಜದ ಪೂರ್ವಾಗ್ರಹ ಪೀಡಿತ ಭಾವನೆಗೂ ನಿದರ್ಶನ.ಸಾಮಾನ್ಯವಾಗ...